`ಸ್ಟೈಲ್ ಕಿಂಗ್` ನಾಳೆಯಿಂದ ತೆರೆಗೆ
Posted date: 12 Thu, May 2016 – 12:14:10 PM

ಮಾರುತಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಾರುತಿ ಜಡಿಯವರ್ ಅವರು ನಿರ್ಮಿಸಿರುವ ‘ಸ್ಟೈಲ್ ಕಿಂಗ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.     ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಅವರು ದ್ವಿಪಾತ್ರದಲ್ಲಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ. ರಮ್ಯಾ ನಂಬಿಸನ್ ಈ ಚಿತ್ರದ ನಾಯಕಿ. ರಂಗಾಯಣ ರಘು, ಸಾಧುಕೋಕಿಲ, ಪದ್ಮಜಾರಾವ್, ಮಿತ್ರ, ಗಿರೀಶ್, ಅಮಿತ್ ಮುಂತಾದವರು ‘ಸ್ಟೈಲ್ ಕಿಂಗ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಟರಾಜ್.ಜಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಸಂತೋಷ್ ಪಾಂಡಿ ಅವರ ಛಾಯಾಗ್ರಹಣವಿದೆ. ಸರವಣನ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಬಾಬಾ ಭಾಸ್ಕರ್ ನೃತ್ಯ ನಿರ್ದೇಶನ ಹಾಗೂ ಅಭಿಮನ್ಯು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed